ಲ್ಯಾಕ್ಟೋಸ್ ಪಚನವಾಗದಿರುವಿಕೆ(ಎಲ್ ಐ)ಯ ಸಮಸ್ಯೆಯು ವಿಶ್ವದಾದ್ಯಂತ ಸಾಮಾನ್ಯವಾದುದಾಗಿದೆ ಹಾಗೂ ಭಾರತದಲ್ಲಿ ಕೂಡಾ ಇದು ಕಂಡುಬರುತ್ತದೆ. ಭಾರತದಲ್ಲಿ ಮೂರರಲ್ಲಿ ಒಂದು ಭಾಗ ಜನಸಂಖ್ಯೆಯು ಲ್ಯಾಕ್ಟೋಸ್ ಸಮಸ್ಯೆಯಿಂದ ನರಳುತ್ತಿದೆ.
ಕರುಳಿನಲ್ಲಿ ಉತ್ಪತ್ತಿಯಾಗುವ ಕಿಣ್ವವಾಗಿರುವ ಲ್ಯಾಕ್ಟೇಸ್ ಪ್ರಮಾಣವು ಕಡಿಮೆ ಇದ್ದಾಗ ಹಾಲಿನಲ್ಲಿಯ ಸಕ್ಕರೆಯ ಅಂಶ ಲ್ಯಾಕ್ಟೋಸ್ ಅನ್ನು ಜೀರ್ಣಿಸಿಕೊಳ್ಳುವುದು ಸಾಧ್ಯವಾಗುವುದಿಲ್ಲ. ಲ್ಯಾಕ್ಟೇಸ್ ಸಮಸ್ಯೆಯು ಲ್ಯಾಕ್ಟೋಸ್ ಅನ್ನು ಸರಿಯಾಗಿ ಜೀರ್ಣಿಸಿಕೊಳ್ಳದಿರುವುದಕ್ಕೆ ಕಾರಣವಾಗುತ್ತದೆ. ಇದರಿಂದ ಹೊಟ್ಟೆ ನೋವು, ತೇಗು, ಕರುಳಿನಲ್ಲಿ ಶಬ್ಧವಾಗುವಿಕೆ, ಗ್ಯಾಸ್, ವಾಂತಿ ಮತ್ತು ಬೇದಿ ಮುಂತಾದ ಸಮಸ್ಯೆಗಳು ಕಂಡುಬರುತ್ತವೆ.
ಕೆಲವೊಮ್ಮೆ, ಹಾಲು ಆಧಾರಿತ ಡೈರಿ ಉತ್ಪನ್ನಗಳ ಜೊತೆಗೆ ಲ್ಯಾಕ್ಟೋಸ್ ಹಲವಾರು ತಯಾರಿಸಿದ ಆಹಾರ ಮತ್ತು ಪಾನೀಯಗಳಲ್ಲಿಯೂ ಕೂಡಾ ಕಂಡುಬರುತ್ತದೆ. ಇದು ಕೂಡಾ ಎಲ್ ಐ ಉಂಟುಮಾಡುತ್ತದೆ. ನೈಸರ್ಗಿಕ ಮತ್ತು ಸುರಕ್ಷಿತವಾಗಿ ಈ ಲ್ಯಾಕ್ಟೋಸ್ ಸಮಸ್ಯೆಯನ್ನು ನಿರ್ವಹಿಸಲು ಯಾಮೂ ಟ್ಯಾಬ್ಲೆಟ್ ಗಳನ್ನು (ಲ್ಯಾಕ್ಟೇಸ್ ಎಂಜೈಮ್ ಜಗಿಯಬಹುದಾದ ಮಾತ್ರೆಗಳು) ಪ್ರಪ್ರಥಮ ಬಾರಿಗೆ ಭಾರತದಲ್ಲಿ ಪರಿಚಯಿಸಲಾಗುತ್ತಿದೆ. ಇದು ಲ್ಯಾಕ್ಟೋಸ್ ಅನ್ನು ಛಿದ್ರಗೊಳಿಸಲು ಸಹಾಯಕವಾಗುತ್ತದೆ ಹಾಗೂ ಲ್ಯಾಕ್ಟೋಸ್ ತಡೆದುಕೊಳ್ಳದಿರುವಿಕೆಯ ಲಕ್ಷಣಗಳಿಂದ ಪರಿಹಾರ ನೀಡುತ್ತದೆ.
ಲ್ಯಾಕ್ಟೆಸ್ ಎಂಜೈಮ್ ಟ್ಯಾಬ್ಲೆಟ್ ಗಳು
ಜಗಿದು ತಿನ್ನಬಹುದಾದ ಲ್ಯಾಕ್ಟೇಸ್ ಮಾತ್ರೆಗಳು ಒಂದು ಡಯಟರಿ ಸಪ್ಲಿಮೆಂಟ್ ಆಗಿದ್ದು ಡೈರಿ ಆಹಾರಗಳನ್ನು ಹೆಚ್ಚು ಸುಲಭವಾಗಿ ಪಚನವಾಗುವಂತೆ ಮಾಡಲು ಸಹಾಯಕವಾಗಿರುತ್ತವೆ. ಜಗಿದು ತಿನ್ನಬಹುದಾದ ಈ ಲ್ಯಾಕ್ಟೇಸ್ ಮಾತ್ರೆಗಳು ನೈಸರ್ಗಿಕ ಕಿಣ್ವವಾಗಿದ್ದು ಇದನ್ನು ಫಂಗಸ್, ಆಸ್ಪರ್ಗಿಲ್ ಸೋರ್ಜೆ ಇಂದ ಪಡೆಯಲಾಗಿದ್ದು ಇದು ಡೈರಿ ಆಹಾರಗಳಲ್ಲಿ ಕಂಡುಬರುವ ಸಕ್ಕರೆ ಅಂಶ ಲ್ಯಾಕ್ಟೋಸ್ ಅನ್ನು ಛಿದ್ರವಾಗಿಸಲು ಸಹಾಯಕಾರಿಯಾಗಿರುತ್ತದೆ.
ಅಂಶಗಳು: ಜಗಿಯಬಹುದಾದ ಪ್ರತಿಯೊಂದು ಯಾಮೂ ಮಾತ್ರೆಯು ಈ ಅಂಶಗಳನ್ನು ಹೊಂದಿರುತ್ತದೆ: ಲ್ಯಾಕ್ಟೇಸ್ : 4500 ಎಫ್ ಸಿಸಿ ಯುನಿಟ್ಸ್
ಬಳಸುವ ವಿಧಾನ: 1-2 ಮಾತ್ರೆಗಳನ್ನು ಡೈರಿ (ಲ್ಯಾಕ್ಟೋಸ್) ಅಂಶಗಳನ್ನು ಹೊಂದಿರುವ ಆಹಾರ/ಪಾನೀಯಗಳನ್ನು ಸೇವಿಸುವ ಮೊದಲು ಅಥವಾ ಸ್ವಲ್ಪ ತಿಂದ ನಂತರ ತೆಗೆದುಕೊಳ್ಳಿ. ಮಾತ್ರೆಯನ್ನು ಸರಿಯಾಗಿ ಜಗಿದು ತಿನ್ನಿ. ಹಾಗೂ 20ರಿಂದ 45 ನಿಮಿಷಗಳ ನಂತರ ಕೂಡಾ ನೀವು ಡೈರಿ ಉತ್ಪನ್ನ ತಿನ್ನುವುದು ಮುಂದುವರೆಸಿದರೆ ಇನ್ನೊಂದು ಮಾತ್ರೆಯನ್ನು ತೆಗೆದುಕೊಳ್ಳಿ. ಮಾತ್ರೆ ತಿನ್ನುವುದನ್ನು ತಪ್ಪಿಸಿದರೆ ತಕ್ಷಣ ತೆಗೆದುಕೊಳ್ಳಿ.


