Choose Language:

ಮಗುವಿನಲ್ಲಿ ಕಂಡುಬರುವ ಹೊಟ್ಟೆ ನೋವು ಸರ್ವೆ ಸಾಮಾನ್ಯವಾದುದಾಗಿದೆ. ಈ ಸಂದರ್ಭದಲ್ಲಿ ಮಗುವು ಹೆಚ್ಚು ಅಳುತ್ತದೆ ಮತ್ತು ಈ ಲಕ್ಷಣವು ಹೆಚ್ಚಾಗಿ ಸಂಜೆ ಹಾಗೂ ರಾತ್ರಿ ಸಮಯದಲ್ಲಿ ಕಂಡುಬರುತ್ತದೆ. ಈ ಸಂದರ್ಭದಲ್ಲಿ ಮಗುವು ನೋವಿನಿಂದ ಹೊಟ್ಟೆಗೆ ಕಾಲುಗಳನ್ನು ಆತುಕೊಂಡು ಅಳಲು ಪ್ರಾರಂಭಿಸುತ್ತದೆ.

ಕೆಲವು ಮಕ್ಕಳಲ್ಲಿ ಹೊಟ್ಟೆ ನೋವಿಗೆ ಟ್ರಾನ್ಸಿಯೆಂಟ್ ಲ್ಯಾಕ್ಟೇಸ್ ತೊಂದರೆಯು ಮುಖ್ಯ ಕಾರಣವಾಗಿರುತ್ತದೆ. ಇದಕ್ಕೆ ಪ್ರಮುಖ ಕಾರಣ ಮಕ್ಕಳು ಸರಿಯಾಗಿ ಬೆಳವಣಿಗೆ ಹೊಂದಿರದ ಜೀರ್ಣಾಂಗ ವ್ಯೂಹವನ್ನು ಹೊಂದಿರುವುದು ಆಗಿದೆ. ಆದ್ದರಿಂದ ಅವರು ಹಾಲಿನಲ್ಲಿರುವ ಲ್ಯಾಕ್ಟೋಸ್ ಅನ್ನು ಜೀರ್ಣಗೊಳಿಸಲು ಸಾಕಷ್ಟು ಪ್ರಮಾಣದ ಲ್ಯಾಕ್ಟೇಸ್ ಅನ್ನು ಬಿಡುಗಡೆಗೊಳಿಸುತ್ತಿರುವುದಿಲ್ಲ. ಒಂದು ವೇಳೆ ನಿಮ್ಮ ಮಗುವು ಲ್ಯಾಕ್ಟೋಸ್ ಅನ್ನು ಸರಿಯಾದ ರೀತಿಯಲ್ಲಿ ಜೀರ್ಣಗೊಳಿಸಿಕೊಳ್ಳಲು ಸಾಧ್ಯವಿಲ್ಲದಿದ್ದರೆ ಅದು ಬೇಧಿ, ಹೊಟ್ಟೆ ನೋವು, ತೇಗುವುದು, ಅಥವಾ ಗ್ಯಾಸ್ ಸಮಸ್ಯೆಯನ್ನು ಎದೆಹಾಲು ಕುಡಿದ ನಂತರ, ಚೀಸ್ ಅಥವಾ ಮೊಸರು ತಿಂದ 30 ನಿಮಿಷಗಳಿಂದ ಎರಡು ತಾಸುಗಳವರೆಗೆ ಘನ ಆಹಾರವನ್ನು ಸೇವಿಸುವವರೆಗೆ ಅನುಭವಿಸುತ್ತಿರುತ್ತಾರೆ.

ಮಗುವಿನಲ್ಲಿ ಕಂಡುಬರುವ ಹೊಟ್ಟೆ ನೋವು ಮತ್ತು ಲ್ಯಾಕ್ಟೊಸ್ ಜೀರ್ಣವಾಗದಿರುವಿಕೆಯ ಸಮಸ್ಯೆಯನ್ನು ನೈಸರ್ಗಿಕವಾಗಿ ಮತ್ತು ಸುರಕ್ಷಿತವಾಗಿ ಪರಿಹರಿಸಿಕೊಳ್ಳಲು ಅಂದರೆ ಲ್ಯಾಕ್ಟೋಸ್ ಅನ್ನು ಚೂರಾಗಿಸಲು ಯಾಮೂ ಡ್ರಾಪ್ಸ್ (ಲ್ಯಾಕ್ಟೇಸ್ ಎಂಜೈಮ್ ಡ್ರಾಪ್ಸ್) ಅನ್ನು ಭಾರತದಲ್ಲಿ ಮೊಟ್ಟಮೊದಲ ಬಾರಿಗೆ ಪರಿಚಯಿಸಲಾಗುತ್ತಿದೆ.

ಲ್ಯಾಕ್ಟೇಸ್ ಎಂಜೈಮ್ ಡ್ರಾಪ್ಸ್

ಲ್ಯಾಕ್ಟೇಸ್ ಎಂಜೈಮ್ ಡ್ರಾಪ್ ಗಳು ಡಯಟರಿ ಸಪ್ಲಿಮೆಂಟ್ ಆಗಿದ್ದು ಇದು ಹಾಲನ್ನು ಸರಿಯಾಗಿ ಜೀರ್ಣವಾಗಿಸಲು ಸಹಾಯಕವಾಗುತ್ತದೆ. ಈ ಡ್ರಾಪ್ ಗಳು ನೈಸರ್ಗಿಕ ಎಂಜೈಮ್ ಅನ್ನು ಹೊಂದಿದ್ದು ಇದನ್ನು ಫಂಗಸ್, ಆಸ್ಪರ್ ಗಿಲ್ಲುಸೊರ್ಯಾಜ್ ನಿಂದ ಪಡೆಯಲಾಗಿರುತ್ತದೆ ಹಾಗೂ ಇದು ಹಾಲಿನಲ್ಲಿರುವ ಸಂಕೀರ್ಣ ಸಕ್ಕರೆಯ ಅಂಶವಾಗಿರುವ ಲ್ಯಾಕ್ಟೋಸ್ ಅನ್ನು ಚೂರಾಗಿಸಲು ಸಹಾಯಕವಾಗುತ್ತದೆ.

ಅಂಶಗಳು:ಪ್ರತಿಯೊಂದು ಎಂಎಲ್ ಯಾಮೂ ಡ್ರಾಪ್ ಗಳು ಈ ಕೆಳಗಿನ ಅಂಶವನ್ನು ಹೊಂದಿರುತ್ತವೆ : ಲ್ಯಾಕ್ಟೇಸ್ ಎಂಜೈಮ್ : 600 ಎಫ್ ಸಿಸಿ ಯುನಿಟ್ ಗಳು

ಬಳಕೆಯ ವಿಧಾನ : I (ಎದೆ ಹಾಲು ಕುಡಿಸಲು): ಹೊರತೆಗೆದಿರುವ ಎದೆಹಾಲಿಗೆ 4ರಿಂದ 5 ಯಾಮೂ ಡ್ರಾಪ್ಸ್ ಅನ್ನು ಹಾಕಿ. ಇದು ಹೆಚ್ಚಾಗಿ ಲ್ಯಾಕ್ಟೋಸ್ ಅನ್ನು ಹೊಂದಿರುತ್ತದೆ. ಕೆಲವು ನಿಮಿಷಗಳವರೆಗೆ ಕಾಯಿರಿ, ನಂತರ ಈ ಮಿಶ್ರಣವನ್ನು ಮಗುವಿಗೆ ನೀಡಿ ಮತ್ತು ನಂತರ ಸಾಮಾನ್ಯವಾಗಿ ಹಾಲು ಕುಡಿಸುವ ರೀತಿಯಲ್ಲಿಯೇ ಹಾಲು ಕುಡಿಸಿ.

ಬಳಕೆಯ ವಿಧಾನ II (ಮಕ್ಕಳಿಗೆ ತಿನ್ನಿಸುವ ಫಾರ್ಮಲಾ ಆಹಾರ): ಸುಮಾರು 50 ಎಂಎಲ್ ಶಿಶು ಆಹಾರಕ್ಕೆ 4ರಿಂದ 5 ಯಾಮೂ ಡ್ರಾಪ್ಸ್ ಅನ್ನು ಅದು ಬಿಸಿ ಇರುವಾಗ ಹಾಕಿ. ಇದನ್ನು 30 ನಿಮಿಷಗಳವರೆಗೆ ಕಾಯಿರಿ, ಫಾರ್ಮುಲಾವನ್ನು ಸರಿಯಾಗಿ ಕಲಸಿ ಮಗುವಿಗೆ ತಿನಿಸಿ.

100% ಸಸ್ಯಾಹಾರಿ
Approved