• ಲ್ಯಾಕ್ಟೋಸ್ ಜೀರ್ಣವಾಗದಿರುವಿಕೆ

  ಲ್ಯಾಕ್ಟೋಸ್ ಜೀರ್ಣವಾಗದಿರುವಿಕೆ

 • 1
 • ಲ್ಯಾಕ್ಟೋಸ್ ಜೀರ್ಣವಾಗದಿರುವಿಕೆ ಏನಾಗಿದೆ

  ನಿಮ್ಮ ದೇಹವು ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು (ಡೈರಿ ಉತ್ಪನ್ನಗಳು) ಜೀರ್ಣಿಸಿಕೊಳ್ಳುವುದಕ್ಕೆ ಸಾಧ್ಯವಾಗದಿರುವ ಸ್ಥಿತಿಯನ್ನು ಹೀಗೆ ಕರೆಯಲಾಗುತ್ತದೆ. ಒಂದು ವೇಳೆ ನಿಮಗೆ ಲ್ಯಾಕ್ಟೋಸ್ ಜೀರ್ಣಕ್ರಿಯೆಯ ಸಮಸ್ಯೆ ಇದ್ದು ನೀವು ಡೈರಿ ಉತ್ಪನ್ನಗಳನ್ನು ತಿನ್ನುತ್ತಿದ್ದರೆ ನಿಮೆಗೆ ಡಯರಿಯಾ, ಹೊಟ್ಟೆ ನೋವು ಮತ್ತು ಗ್ಯಾಸ್ ಉಂಟಾಗುತ್ತದೆ.

  ಲ್ಯಾಕ್ಟೋಸ್ ಜೀರ್ಣವಾಗದಿರುವಿಕೆಯ ಸಮಸ್ಯೆಯು ಯಾರಿಗಾದರೂ ಉಂಟಾಗಬಹುದಾಗಿದೆ. ಆದರೆ ಇದು ಸಾಮಾನ್ಯವಾಗಿ ಅಮೇರಿಕನ್ ಮೂಲನಿವಾಸಿಗಳು, ಏಷಿಯನ್ನರು, ಭಾರತೀಯರು ಮತ್ತು ಕಪ್ಪು ಜನರಲ್ಲಿ ಹೆಚ್ಚಾಗಿ ಕಂಡುಬರುತ್ತದೆ.

  ಲ್ಯಾಕ್ಟೇಸ್ ಜೀರ್ಣಕ್ರಿಯೆಯ ಸಮಸ್ಯೆ ಇಲ್ಲದಿರುವವರಲ್ಲಿ ದೇಹವು ‘ಲ್ಯಾಕ್ಟೇಸ್’ ಎನ್ನುವ ಪ್ರೋಟಿನ್ ಅನ್ನು ಬಿಡುಗಡೆ ಮಾಡುತ್ತದೆ ಹಾಗೂ ಇದು ಲ್ಯಾಕ್ಟೋಸ್ ಅಂದರೆ ಹಾಲಿನಲ್ಲಿ ಕಂಡುಬರುವ ಸಕ್ಕರೆ ಅನ್ನು ಚೂರಾಗಿಸುತ್ತದೆ. ಲ್ಯಾಕ್ಟೊಸ್ ಜೀರ್ಣಕ್ರಿಯೆಯ ಸಮಸ್ಯೆ ಇರುವವರಲ್ಲಿ ದೇಹವು ಹೆಚ್ಚಿನ ಪ್ರಮಾಣದಲ್ಲಿ ಕಿಣ್ವವನ್ನು ಬಿಡುಗಡೆ ಮಾಡುವುದಿಲ್ಲ ಅಥವಾ ಅದು ಕಾರ್ಯನಿರ್ವಹಿಸಬೇಕಾದ ರೀತಿಯಲ್ಲಿ ಕಾರ್ಯನಿರ್ವಹಿಸುವುದಿಲ್ಲ. ಅಲ್ಲದೆ ಕೆಲವು ಸೋಂಕುಗಳು ಅಂದರೆ ಫುಡ್ ಪಾಯ್ಸನಿಂಗ್ ಕಿಣ್ವವನ್ನು ಹಾಳು ಮಾಡುತ್ತವೆ. ಆದರೆ ಇದರಿಂದ ಸಮಸ್ಯೆ ಉಂಟಾಗಿದ್ದಲ್ಲಿ ಕೆಲವೇ ವಾರಗಳಲ್ಲಿ ಇದು ಕಡಿಮೆಯಾಗುತ್ತದೆ. ಲ್ಯಾಕ್ಟೋಸ್ ಜೀರ್ಣವಾಗದಿರುವಿಕೆಯ ಸಮಸ್ಯೆ ಇರುವವರು ಅವರ ಸಮಸ್ಯೆ ಪರಿಹಾರವಾಗಲು ಸಪ್ಲಿಮೆಂಟ್ ಅನ್ನು ಬಳಸಬಹುದಾಗಿದೆ.

 • ಲ್ಯಾಕ್ಟೋಸ್ ಜೀರ್ಣವಾಗದಿರುವಿಕೆಯು ಎಷ್ಟು ಸಾಮಾನ್ಯಗಿದೆ

  ಭಾರತದಲ್ಲಿ ಸುಮಾರು 60ರಿಂದ 70 ಶೇಕಡಾ ಜನರು ಲ್ಯಾಕ್ಟೋಸ್ ಜೀರ್ಣವಾಗದಿರುವಿಕೆಯ ಸಮಸ್ಯೆಯನ್ನು ಹೊಂದಿದ್ದಾರೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಆರೋಗ್ಯವಂತ ಜನಸಂಖ್ಯೆಯು ದಕ್ಷಿಣಕ್ಕಿಂತ ಉತ್ತರದಲ್ಲಿ ಕಂಡುಬರುತ್ತಾರೆ. ಉತ್ತರ ಭಾರತದ ಜನರು ಈ ವಿಷಯಕ್ಕೆ ಸಂಬಂಧಿಸಿದಂತೆ ಹೆಚ್ಚು ಆರೋಗ್ಯವಂತರಾಗಿರಲು ಅವರು ಆರ್ಯನ್ನರಾಗಿರುವುದು ಕಾರಣವಾಗಿದೆ. ಏಕೆಂದರೆ ಅವರು ಅನೇಕ ಶತಮಾನಗಳಿಂದ ಹೈನುಗಾರಿಕೆಯನ್ನು ಮಾಡುತ್ತಿದ್ದು ಅವರ ದೇಹವು ಅದಕ್ಕೆ ಒಗ್ಗಿಕೊಂಡಿದೆ.।

  ಯುರೋಪಿಯನ್ನರು ಇಡೀ ವಿಶ್ವದಲ್ಲೆ ಹೆಚ್ಚಿನ ಪ್ರಮಾಣದಲ್ಲಿ ಲ್ಯಾಕ್ಟೋಸ್ ಹೀರಿಕೊಳ್ಳುವಿಕೆಯ ಸಾಮರ್ಥ್ಯವನ್ನು ಹೊಂದಿದವರಾಗಿದ್ದಾರೆ. ಆಫ್ರಿಕನ್ , ಏಷಿಯನ್, ಆಫ್ರಿಕನ್-ಅಮೇರಿಕನ್ ಜನರು ಲ್ಯಾಕ್ಟೋಸ್ ಜೀರ್ಣವಾಗುವಿಕೆಯಲ್ಲಿ ಕಡಿಮೆ ಸಾಮರ್ಥ್ಯವನ್ನು ಹೊಂದಿದ್ದಾರೆ ಹಾಗೂ ಪ್ರಾರಂಭದ ವಯಸ್ಸಿನಲ್ಲಿ ಈ ಸಮಸ್ಯೆಗೆ ಒಳಗಾಗುವ ಸಾಧ್ಯತೆಯನ್ನು ಹೊಂದಿದ್ದಾರೆ. ವಯಸ್ಸು ಹೆಚ್ಚಾದಂತೆ ಈ ಸಮಸ್ಯೆಯು ಹೆಚ್ಚಾಗುತ್ತದೆ. ಅದರಲ್ಲೂ ಇಳಿ ವಯಸ್ಸಿನಲ್ಲಿ ಇದು ಹೆಚ್ಚಾಗುತ್ತದೆ.

 • ಲ್ಯಾಕ್ಟೋಸ್ ಜೀರ್ಣವಾಗದಿರುವಿಕೆಗೆ ಕಾರಣವೇನು

  ಸಣ್ಣ ಕರುಳು ಸಾಕಷ್ಟು ಪ್ರಮಾಣದಲ್ಲಿ ಲ್ಯಾಕ್ಟೇಸ್ ಎಂಜೈಮ್ ಅನ್ನು ಬಿಡುಗಡೆ ಮಾಡದಿದ್ದಾಗ ಲ್ಯಾಕ್ಟೋಸ್ ಜೀರ್ಣವಾಗದಿರುವಿಕೆಯ ಸಮಸ್ಯೆಯು ಉಂಟಾಗುತ್ತದೆ. ನಿಮ್ಮ ದೇಹವು ಲ್ಯಾಕ್ಟೋಸ್ ಅನ್ನು ಛಿದ್ರವಾಗಿಸಿ ಅದು ಜೀರ್ಣವಾಗುವಂತೆ ನೋಡಿಕೊಳ್ಳಲು ನಿಮ್ಮ ದೇಹಕ್ಕೆ ಲ್ಯಾಕ್ಟೇಸ್ ಅಗತ್ಯವಿದೆ. (ಡೈರಿ ಉತ್ಪನ್ನಗಳಲ್ಲಿ ಕಂಡುಬರುವ ಸಕ್ಕರೆಯ ಅಂಶ).

  ಲ್ಯಾಕ್ಟೋಸ್ ಜೀರ್ಣವಾಗದಿರುವಿಕೆಯ ಸಮಸ್ಯೆಯು ಸಾಮಾನ್ಯವಾಗಿ ವಯಸ್ಸಾದಂತೆ ಹೆಚ್ಚಾಗುತ್ತದೆ. ಜನರು ಸಾಮಾನ್ಯವಾಗಿ ಅವರ ಹದಿವಯಸ್ಸಿನಲ್ಲಿ ಹಾಗೂ ವಯಸ್ಕರಲ್ಲಿ (30ರಿಂದ 40) ಕಂಡುಬರುತ್ತದೆ. ಸಾಮಾನ್ಯವಾಗಿ ಲ್ಯಾಕ್ಟೋಸ್ ಜೀರ್ಣವಾಗದಿರುವಿಕೆಯ ಸಮಸ್ಯೆಯು ಕುಟುಂಬಗಳ ವಂಶವಾಹಿನಿಯಲ್ಲಿ ಕಂಡುಬರುತ್ತದೆ. ಲ್ಯಾಕ್ಟೋಸ್ ಜೀರ್ಣವಾಗದಿರುವಿಕೆಯು ಸೋಂಕಿನಿಂದ, ಕೀಮೊಥೆರಪಿಯಿಂದ, ಪೆನ್ಸಿಲಿನ್ ಪ್ರತಿಕ್ರಿಯೆಯಿಂದ, ಸರ್ಜರಿ, ಗರ್ಭಧರಿಸುವುದು ಅಥವಾ ಹೆಚ್ಚಿನ ಸಮಯದವರೆಗೆ ಹಾಲಿನ ಉತ್ಪನ್ನಗಳನ್ನು ಸೇವನೆ ಮಾಡದಿದ್ದಲ್ಲಿ ಈ ಸಮಸ್ಯೆಯು ಕಂಡು ಬರುವ ಸಾಧ್ಯತೆ ಇರುತ್ತದೆ. ಅಲ್ಲದೆ, ನಿರ್ಧಿಷ್ಟವಾದ ಜನಾಂಗದವರು ಲ್ಯಾಕ್ಟೋಸ್ ಜೀರ್ಣವಾಗದಿರುವ ಸಮಸ್ಯೆಯನ್ನು ಎದುರಿಸುತ್ತಾರೆ.

  ಕೆಲವೊಂದು ಅಪರೂಪದ ಪ್ರಸಂಗಗಳಲ್ಲಿ ಆಗಷ್ಟೆ ಜನಿಸಿದ ಮಗು ಕೂಡಾ ಈ ಸಮಸ್ಯೆಗೆ ಒಳಗಾಗುವುದು ಕಂಡುಬರುತ್ತದೆ. ಸಾಮಾನ್ಯವಾಗಿ ಮಕ್ಕಳು ದೊಡ್ಡವರಾದಂತೆ ಈ ಸಮಸ್ಯೆಯಿಂದ ಹೊರಬರುತ್ತಾರೆ.

 • ಲ್ಯಾಕ್ಟೊಸ್ ಜೀರ್ಣವಾಗದಿರುವಿಕೆಯ ಸಮಸ್ಯೆಯ ಲಕ್ಷಣಗಳು ಯಾವುವು

  ನೀವು ಹಾಲು ಅಥವಾ ಹಾಲಿನ ಕುಡಿಯಲು ನಂತರ ಈ ರೋಗಲಕ್ಷಣಗಳು ಸಂಭವಿಸುತ್ತವೆ. ಇವುಗಳಲ್ಲಿ:

  • ಹೊಟ್ಟೆನೋವು
  • पेट फूलना
  • ವಾಯು
  • ಗ್ಯಾಸ್
  • ವಾಕರಿಕೆ
  • ವಾಂತಿ
  • ಅತಿಸಾರ
 • ಲ್ಯಾಕ್ಟೋಸ್  ಜೀರ್ಣವಾಗದಿರುವಿಕೆಯಿಂದ ಉಂಟಾಗುವ ಸಮಸ್ಯೆಗಳು ಯಾವುವು

  ಡೈರಿ ಉತ್ಪನ್ನಗಳು ಅಂದರೆ ಹಾಲು ಮುಂತಾದವುಗಳು ಆರೋಗ್ಯಕರ ಡಯಟ್ ಗೆ ಮುಖ್ಯವಾದವುಗಳಾಗಿವೆ. ಅವುಗಳು ಕ್ಯಾಲ್ಸಿಯಂ, ಪ್ರೋಟಿನ್ ಮತ್ತು ವಿಟಮಿನ್ ಗಳನ್ನು ಅಂದರೆ ವಿಟಮಿನ್ ಎ, ಬಿ12 ಮತ್ತು ಡಿ ಅನ್ನು ಹೊಂದಿರುತ್ತದೆ. ಯುವವಯಸ್ಸಿನವರಿಗೆ ಪ್ರತಿದಿನ ನೀಡಬಹುದಾದ ಕ್ಯಾಲ್ಸಿಯಂ ಪ್ರಮಾಣವು (ಆರ್ ಡಿಎ) 700 ಎಂಜಿ ಆಗಿದೆ.

  ಲ್ಯಾಕ್ಟೋಸ್ ಇದು ಒಂದು ಮುಖ್ಯವಾದ ಅಂಶವಾಗಿದ್ದು ಇದು ಇತರೆ ಲೋಹದ ಅಂಶಗಳನ್ನು, ಮ್ಯಾಗ್ನೆಷಿಯಂ ಮತ್ತು ಜಿಂಕ್ ಅನ್ನು ಹೊಂದಿರುತ್ತದೆ. ಈ ವಿಟಮಿನ್ ಗಳು ಮತ್ತು ಲೋಹಾಂಶಗಳು ಆರೋಗ್ಯಕರ ಮತ್ತು ಶಕ್ತಿಶಾಲಿಯಾದ ಮೂಳೆಗಳನ್ನು ಹೊಂದಲು ಅಗತ್ಯವಾಗಿದೆ.

  ಒಂದು ವೇಳೆ ಲ್ಯಾಕ್ಟೋಸ್ ಜೀರ್ಣವಾಗದಿರುವಿಕೆಯ ಸಮಸ್ಯೆಯನ್ನು ನೀವು ಹೊಂದಿದ್ದರೆ ಮುಖ್ಯವಾದ ವಿಟಮಿನ್ ಗಳು ಮತ್ತು ಲೋಹಾಂಶಗಳ ಆರ್ ಡಿಎ ಪ್ರಮಾಣವನ್ನು ಪಡೆದುಕೊಳ್ಳುವುದು ಕಷ್ಟಕರವಾಗುತ್ತದೆ. ಇದು ನಿಮಗೆ ಈ ಮುಂದಿನ ಸಮಸ್ಯೆಗಳನ್ನು ಹೊಂದಲು ಕಾರಣವಾಗುತ್ತದೆ.

  • ಓಸ್ಟಿಯೊಪೆನಿಯಾ, ಇದು ಮೂಳೆಯಲ್ಲಿ ಕಡಿಮೆ ಪ್ರಮಾಣದ ಲೋಹಾಂಶವು ಕಂಡುಬರುವುದರಿಂದ ಉಂಟಾಗುವ ಸಮಸ್ಯೆಯಾಗಿದೆ. ಒಂದು ವೇಳೆ ಒಸ್ಟಿಯೊಪೆನಿಯಾವನ್ನು ಸರಿಯಾಗಿ ಚಿಕಿತ್ಸೆ ಮಾಡದಿದ್ದಲ್ಲಿ ಇದು ಒಸ್ಟಿಯೊಪೊರೊಸಿಸ್ ಆಗಿ ಬದಲಾಗುವ ಸಾಧ್ಯತೆ ಇರುತ್ತದೆ.
  • ಒಸ್ಟಿಯೊಪೊರೊಸಿಸ್, ರೋಗದಲ್ಲಿ ಮೂಳೆಗಳು ಸವೆತ ಉಂಟಾಗುವುದಲ್ಲದೆ ಅವು ಸಪೂರ ಮತ್ತು ಶಿಥಿಲವಾಗುತ್ತವೆ. ಒಂದು ವೇಳೆ ಒಸ್ಟಿಯೊಪೊರೊಸಿಸ್ ಇದ್ದರೆ ಮೂಳೆ ಮುರಿತ ಉಂಟಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ.
  • ಅಪೌಷ್ಟಿಕತೆ ಸಮಸ್ಯೆಯು ನೀವು ಸೇವಿಸುವ ಆಹಾರದಲ್ಲಿ ಸಾಕಷ್ಟು ಪ್ರಮಾಣದಲ್ಲಿ ನಿಮ್ಮ ದೇಹ ಆರೋಗ್ಯಕರವಾಗಿ ಕಾರ್ಯನಿರ್ವಹಿಸಲು ಅಗತ್ಯವಾದ ಪೋಷಕಾಂಶಗಳನ್ನು ಪಡೆದುಕೊಳ್ಳುವುದು ಸಾಧ್ಯವಾಗದಿದ್ದಾಗ ಉಂಟಾಗುತ್ತದೆ. ಒಂದು ವೇಳೆ ನೀವು ಅಪೌಷ್ಟಿಕತೆಯಿಂದ ನರಳುತ್ತಿದ್ದಲ್ಲಿ ನೀವು ಸುಸ್ತಾದಂತೆ ಮತ್ತು ಖಿನ್ನತೆ ಇದ್ದಂತೆ ಎನಿಸುತ್ತಿರುತ್ತದೆ
  • ತೂಕ, अಕಳೆದುಕೊಳ್ಳುವುದು. ತೂಕವನ್ನು ಹೆಚ್ಚಾಗಿ ಕಳೆದುಕೊಳ್ಳುವುದು ನಿಮ್ಮ ಆರೋಗ್ಯಕ್ಕೆ ಹಾನಿಯನ್ನುಂಟು ಮಾಡಬಹುದು ಮತ್ತು ಇದು ಒಸ್ಟಿಯೊಪೊರೊಸಿಸ್ ಉಂಟಾಗಲು ಕಾರಣವಾಗಬಹುದು.
 • ಲ್ಯಾಕ್ಟೋಸ್ ಜೀರ್ಣವಾಗದಿರುವಿಕೆಯು ಸಾಮಾನ್ಯವಾಗಿ ಆಹಾರದ ಅಲರ್ಜಿಯಾಗಿದೆಯೇ ?

  ಇಲ್ಲ. ಹಲವಾರು ಜನರು ಹಾಲು ಮತ್ತು ಡೈರಿ ಉತ್ಪನ್ನಗಳಿಗೆ ಅಲರ್ಜಿಯನ್ನು ತೋರ್ಪಡಿಸುತ್ತಿರುತ್ತಾರೆ. ಆದರೆ ಡೈರಿ ಅಲರ್ಜಿಯು ಹೆಚ್ಚಾಗಿ ಲ್ಯಾಕ್ಟೋಸ್ ಜೀರ್ಣವಾಗದಿರುವಿಕೆಗಿಂತ ಭಿನ್ನವಾದುದಾಗಿದೆ. ಅಲರ್ಜಿ ಇರುವ ಸಂದರ್ಭದಲ್ಲಿ, ಹಾಲಿನಲ್ಲಿರುವ ಸಕ್ಕರೆ ಅಂಶಕ್ಕಿಂತ ಹೆಚ್ಚಾಗಿ ಪ್ರೋಟಿನ್ ಗೆ ದೇಹವು ಪ್ರತಿಕ್ರಿಯಿಸುತ್ತದೆ. ಅಲ್ಲದೆ ಅಲರ್ಜಿಯು ದೇಹದಲ್ಲಿರುವ ಪ್ರತಿರೋಧ ತೋರ್ಪಡಿಸುವ ರೋಗನಿರೋಧಕ ಅಂಶಕ್ಕೆ ಸಂಬಂಧಿಸಿದ್ದಾಗಿದೆ ಆದರೆ ಲ್ಯಾಕ್ಟೋಸ್ ಜೀರ್ಣವಾಗದಿರುವಿಕೆಯು ಇದಕ್ಕೆ ಸಂಬಮಧಿಸಿದ್ದಲ್ಲ.

 • ಲ್ಯಾಕ್ಟೋಸ್ ಸಮಸ್ಯೆ/ಲ್ಯಾಕ್ಟೋಸ್ ಜೀರ್ಣವಾಗದಿರುವಿಕೆಗೆ ಸಂಬಂಧಿಸಿದಂತೆ ಯಾವುದಾದರೂ ಪರೀಕ್ಷೆ ಇದೆಯಾ ?

  ಲ್ಯಾಕ್ಟೇಸ್ ಕೊರತೆಯ ಡಯಾಗ್ನೊಸಿಸ್

  • ಎಚ್ 2 ಉಸಿರಾಟದ ಪರೀಕ್ಷೆ : ಹೊರಬಿಡುವ ಉಸಿರಿನಲ್ಲಿರುವ ಕರುಳಿನ ಎಚ್ 2 ಬ್ಯಾಕ್ಟಿರಿಯಾವು ಲ್ಯಾಕ್ಟೋಸ್ ನಿಂದ ಉಂಟಾಗುವ ಹೈಡ್ರೋಜನ್ (ಎಚ್2) ಅನ್ನು ಬಳಸುತ್ತದೆ. ಡಯಾಗ್ನೊಸ್ಟಿಕ್ ಮಾಡುವ ಸಮಯದಲ್ಲಿ 50ಗ್ರಾಂ ಲ್ಯಾಕ್ಟೋಸ್ ಅನ್ನು ಚುಚ್ಚುವ ಮೂಲಕ > 20 ಪಿಪಿಎಂ(ಪ್ರತಿ ಮಿಲಿಯನ್ ಗೆ) ಇರುತ್ತದೆ.
  • ಲ್ಯಾಕ್ಟೋಸ್ ಟಾಲರೆನ್ಸ್ ಟೆಸ್ಟ್ (ಎಲ್ ಟಿಟಿ) : ರಕ್ತದಲ್ಲಿರುವ ಗ್ಲೂಕೋಸ್ ಪ್ರಮಾಣದಲ್ಲಿ ಕಡಿಮೆಯಾಗುವುದು ಅಥವಾ ಅನಗತ್ಯ ಹೆಚ್ಚಳ ಮುಂತಾದವು ಕಂಡುಬರುವುದು. 50 ಗ್ರಾಂ ಲ್ಯಾಕ್ಟೋಸ್ ಇಂಜೆಕ್ಟ್ ಮಾಡಿದ ನಂತರದಲ್ಲಿಯೂ ಕೂಡಾ ಎಲ್ ಟಿಟಿಯು ರಕ್ತದಲ್ಲಿಯ ಗ್ಲೂಕೋಸ್ ನಲ್ಲಿ ಹೆಚ್ಚಳವು 30 ನಿಮಿಷಗಳಲ್ಲಿ ಕಂಡುಬರದಿದ್ದರೆ ಸಮಸ್ಯೆ ಇದೆ ಎಂದುಕೊಳ್ಳಬಹುದಾಗಿದೆ.
  • ಮಲದಲ್ಲಿಯ ಆ್ಯಸಿಡಿಟಿ ಪರೀಕ್ಷೆ : ಮಲದಲ್ಲಿರುವ ಜೀರ್ಣವಾಗದ ಲ್ಯಾಕ್ಟೋಸ್ ಲ್ಯಾಕ್ಟಿಕ್ ಆ್ಯಸಿಡ್ ಮತ್ತು ಇತರೆ ಆ್ಯಸಿಡ್ ಗಳನ್ನು ಉಂಟುಮಾಡುತ್ತದೆ ಇದನ್ನು ಮಲ ಪರೀಕ್ಷೆಯಲ್ಲಿ ಕಂಡುಕೊಳ್ಳಬಹುದಾಗಿದೆ.
  • ಹೊಸ ಪರೀಕ್ಷೆಗಳು : रರಕ್ತ ಅಥವಾ ಜೊಲ್ಲಿನ ಜೆನೆಟಿಕ್ ಪರೀಕ್ಷೆ.

  ಇದರಿಂದ ಲ್ಯಾಕ್ಟೋಸ್ ಜೀರ್ಣವಾಗದಿರುವಿಕೆಯನ್ನು ಕಂಡುಕೊಳ್ಳಬಹುದಾಗಿದೆ

  • ಲ್ಯಾಕ್ಟೋಸ್ ಚಾಲೆಂಜ್ ಟೆಸ್ಟ್ : 1ರಿಂದ 3 ತಾಸುಗಳ ಕಾಲ ಉಪವಾಸ ಮಾಡಿದ ನಂತರ 500 ಎಂಎಲ್ ಹಾಲನ್ನು (25 ಗ್ರಾಂ ಲ್ಯಾಕ್ಟೋಸ್) ಸೇವಿಸಿ. ಒಂದು ವೇಳೆ ನಿಮಗೆ ಹೊಟ್ಟೆ ನೋವು, ಗ್ಯಾಸ್, ನೋವು, ತೇಗುವುದು ಅಥವಾ ಬೇಧಿ ಕಂಡುಬಂದರೆ, ನೀವು ಲ್ಯಾಕ್ಟೋಸ್ ಜೀರ್ಣಿಸಿಕೊಳ್ಳುವುದು ಕಷ್ಟ ಎಂದರ್ಥ.
 • ನಾನು ವೈದ್ಯರನ್ನು ಭೇಟಿಯಾಗಬೇಕೆ ?

  ಹೌದು. ಒಂದು ವೇಳೆ ನಿಮಗೆ ಲ್ಯಾಕ್ಟೋಸ್ ಜೀರ್ಣವಾಗದಿರುವ ತೊಂದರೆ ಇದ್ದರೆ ನಿಮ್ಮ ವೈದ್ಯರಿಗೆ ಹೇಳಿ. ಅವನು ಅಥವಾ ಅವಳು ನಿಮಗೆ ಪ್ರಶ್ನೆಗಳನ್ನು ಕೇಳಬಹುದು ಹಾಗೂ ಇತರೆ ಯಾವುದೇ ಸಮಸ್ಯೆಗಳು ಇಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಿ.

 • ಲ್ಯಾಕ್ಟೋಸ್ ಜೀರ್ಣವಾಗದಿರುವ ಸಮಸ್ಯೆಯನ್ನು ಹೇಗೆ ಪರಿಹರಿಸಿಕೊಳ್ಳಬಹುದಾಗಿದೆ ?

  ಹೆಚ್ಚಿನ ಪ್ರಕರಣಗಳಲ್ಲಿ, ಜನರು ಲ್ಯಾಕ್ಟೋಸ್ ಅಂಶವಿರುವುದನ್ನು ನಿಲ್ಲಿಸುತ್ತಾರೆ ಅಥವಾ ಲ್ಯಾಕ್ಟೋಸ್ ರಹಿತ ಅಂಶಗಳನ್ನು ಹೊಂದಿರುವುದನ್ನು ಉಪಯೋಗಿಸಲು ಪ್ರಾರಂಭಿಸುತ್ತಾರೆ. ಈ ರೀತಿಯ ಸೇವನೆ ಮಾಡುವವರ ಕುರಿತಾಗಿ ಒಂದು ಮುಖ್ಯ ಎಚ್ಚರಿಕೆ ಏನೆಂದರೆ ಹಾಲಿನ ಉತ್ಪನ್ನಗಳಿಂದ ದೊರೆಯುವ ಕ್ಯಾಲ್ಸಿಯಂ, ಮ್ಯಾಗ್ನೆಷಿಯಂ, ಪೊಟ್ಯಾಷಿಯಂ, ಪ್ರೋಟಿನ್, ಮತ್ತು ರೈಬೊಫ್ಲಾವಿನ್ ಮುಂತಾದವುಗಳನ್ನು ಇವರುಗಳು ಸಾಕಷ್ಟು ಪ್ರಮಾಣದಲ್ಲಿ ಸೇವಿಸುತ್ತಿದ್ದಾರೆ ಎಂಬುದನ್ನು ಗಮನಿಸಬೇಕಾಗಿದೆ. ಕ್ಯಾಲ್ಸಿಯಂ ಮಹಿಳೆಯರಿಗೆ ಹೆಚ್ಚು ಮುಖ್ಯವಾದುದಾಗಿದೆ ಏಕೆಂದರೆ ಇದು ಮೂಳೆಗಳನ್ನು ಗಟ್ಟಿಯಾಗಿರಿಸುತ್ತದೆ ಹಾಗೂ ಓಸ್ಟಿಯೊಪೊರೊಸಿಸ್ ಉಂಟಾಗುವುದನ್ನು ತಪ್ಪಿಸುತ್ತದೆ. ಆದ್ದರಿಂದ ಹಾಲು ಮತ್ತು ಹಾಲಿನ ಉತ್ಪನ್ನಗಳ ಸೇವನೆಯನ್ನು ತಪ್ಪಿಸುವುದನ್ನು ಶಿಫಾರಸ್ಸು ಮಾಡಲಾಗುವುದಿಲ್ಲ.

  ಲ್ಯಾಕ್ಟೋಸ್ ಹೊಂದಿರುವ ಕೆಲವೇ ಕೆಲವು ಉತ್ಪನ್ನಗಳನ್ನು ಸೇವಿಸುವುದು, ಅಥವಾ ಅವುಗಳನ್ನು ಸಂಪೂರ್ಣವಾಗಿ ಸೇವಿಸದೇ ಇರುವುದರಿಂದ ನಿಮ್ಮ ಡಯಟ್ ನಲ್ಲಿ ವಿಟಮಿನ್ ಗಳು ಮತ್ತು ಲೋಹಾಂಶಗಳನ್ನು ಕಳೆದುಕೊಳ್ಳುತ್ತೀರಿ ಹಾಗೂ ಇದು ತೊಂದರೆಗಳಿಗೆ ಕಾರಣವಾಗುತ್ತದೆ.

  ನಿಮ್ಮ ಸಣ್ಣ ಕರುಳು ಉತ್ಪಾಧಿಸದಿರುವ ಲ್ಯಾಕ್ಟೇಸ್ ಅಂಶವನ್ನು ಲ್ಯಾಕ್ಟೇಸ್ ಕಿಣ್ವ ಮಾತ್ರೆಗಳು ಅಥವಾ ಹನಿಗಳು ನೀಡುತ್ತವೆ, ಮತ್ತು ಇದು ಇದರ ಲಕ್ಷಣಗಳನ್ನು ಕಡಿಮೆ ಮಾಡುವ ಮೂಲಕ ನಿಮ್ಮ ದೇಹವು ನಿಮ್ಮ ಡಯಟ್ ನಲ್ಲಿರುವ ಲ್ಯಾಕ್ಟೇಸ್ ಅನ್ನು ಹೆಚ್ಚು ಸುಲಭವಾಗಿ ಜೀರ್ಣಿಸಿಕೊಳ್ಳಲು ಸಹಾಯಕವಾಗಿಸುತ್ತದೆ. ಇದನ್ನು ಹಾಲಿಗೆ ಸೇರಿಸಬಹುದು ಅಥವಾ ಹಾಲಿನ ಅಂಶದ ಆಹಾರ ಸೇವಿಸುವ ಮೊದಲು ತೆಗೆದುಕೊಳ್ಳಬಹುದಾಗಿದೆ. ಪ್ರತಿಯೊಂದು ಉತ್ಪನ್ನವು ಪ್ರತಿಯೊಬ್ಬ ವ್ಯಕ್ತಿಗೂ ವಿಭಿನ್ನವಾಗಿ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಗಮನದಲ್ಲಿರಿಸಿಕೊಂಡಿರಬೇಕು. ಅಲ್ಲದೆ, ಪ್ರತಿಯೊಬ್ಬರೂ ಕೂಡಾ ಲ್ಯಾಕ್ಟೋಸ್ ಕೊನೆಯ ಅಂಶವನ್ನು ಛಿದ್ರಗೊಳಿಸುವ ಸಾಮರ್ಥ್ಯವನ್ನು ಹೊಂದಿರುವುದಿಲ್ಲ, ಆದ್ದರಿಂದ ಕೆಲವು ಜನರು ಎಂಜೈಮ್ ಸಪ್ಲಿಮೆಂಟ್ ಗೆ ಕೂಡಾ ಈ ಲಕ್ಷಣಗಳನ್ನು ತೋರ್ಪಡಿಸುತ್ತಾರೆ.

  ಲ್ಯಾಕ್ಟೊಸ್ ಜೀರ್ಣವಾಗದಿರುವಿಕೆಯ ಸಮಸ್ಯೆಯನ್ನು ನೈಸರ್ಗಿಕವಾಗಿ ಮತ್ತು ಸುರಕ್ಷಿತವಾಗಿ ಪರಿಹರಿಸಿಕೊಳ್ಳಲು ಅಂದರೆ ಲ್ಯಾಕ್ಟೋಸ್ ಅನ್ನು ಚೂರಾಗಿಸಲು ಯಾಮೂ ಡ್ರಾಪ್ಸ್ (ಲ್ಯಾಕ್ಟೇಸ್ ಎಂಜೈಮ್ ಡ್ರಾಪ್ಸ್) ಅನ್ನು ಭಾರತದಲ್ಲಿ ಮೊಟ್ಟಮೊದಲ ಬಾರಿಗೆ ಪರಿಚಯಿಸಲಾಗುತ್ತಿದೆ. ಹಾಗೂ ಈ ಮೂಲಕ ಲ್ಯಾಕ್ಟೋಸ್ ಜೀರ್ಣವಾಗದಿರುವ ಸಮಸ್ಯೆಯ ಲಕ್ಷಣಗಳನ್ನು ಕಡಿಮೆಗೊಳಿಸುತ್ತದೆ.